ಗೌಡ್ ಸಾರಂಗ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಾರಂಗ್ ಮತ್ತು ಈಗ ಅಳಿವಿನಂಚಿನಲ್ಲಿರುವ ಗೌಡ್ ಎಂಬ ರಾಗದ ಗುಣಲಕ್ಷಣಗಳನ್ನು ಸಂಯೋಜಿಸುವ ರಾಗವಾಗಿದೆ . ರಾಗಗಳ ಸಾರಂಗ್ ಕುಟುಂಬದ ಇತರ ಸದಸ್ಯರಂತಲ್ಲದೆ, ಗೌಡ್ ಸಾರಂಗ್ ನ್ನು ಸಾಮಾನ್ಯ ಕಾಫಿ ಥಾಟ್ ಗಿಂತ ಕಲ್ಯಾಣ್ ಥಾಟ್‌ಗೆ ಸೇರಿಸಲಾಗಿದೆ. ಭಾರತೀಯ ರಾಷ್ಟ್ರಗೀತೆ ಜನಗಣ ಮನವನ್ನು ಗೌಡ್ ಸಾರಂಗ್ ರಾಗದಲ್ಲಿ ಹಾಡಲಾಗಿದೆ. ಭಾರತದ ರಾಷ್ಟ್ರಗೀತೆಯು ರಾಗ ಬಿಲಾವಲ್‌ನಲ್ಲಿದೆ ಎಂದು ಹೇಳಲಾಗಿತ್ತಾದರೂ, ಅದು ಹಾಗಲ್ಲ. ಗೀತೆಯ ಸಂಪೂರ್ಣ ರಾಗವನ್ನು ಬದಲಾಯಿಸುವ ಒಂದು ನಿರ್ದಿಷ್ಟ ಸ್ವರವಿದೆ . ರಾಷ್ಟ್ರಗೀತೆಯಲ್ಲಿ, ತೀವ್ರ ಮಧ್ಯಮ ಸ್ವರ ಉಪಯೋಗಿಸಲಾಗಿದೆ. ರಾಗ ಬಿಲಾವಲ್‌ನಲ್ಲಿ ತೀವ್ರ ಮಧ್ಯಮ ಸ್ವರವಿಲ್ಲ (ನಿಸ್ಸಂಶಯವಾಗಿ, ರಾಗ ಬಿಲಾವಲ್ ಎಲ್ಲಾ ಶುದ್ಧ ಸ್ವರಗಳ ರಾಗವಾಗಿದೆ ಮತ್ತು ಬೇರೆ ಯಾವುದೇ ರೀತಿಯ ಸ್ವರಗಳಿಲ್ಲ). ಆದರೆ ಗೌಡ್ ಸಾರಂಗ್ ರಾಗವು ತೀವ್ರ ಮಧ್ಯಮ ಸ್ವರ ಹೊಂದಿದೆ . ಇದರಿಂದ ಭಾರತದ ರಾಷ್ಟ್ರಗೀತೆಯಾದ ಜನಗಣ ಮನ ರಾಗ ಗೌಡ್ ಸಾರಂಗ್‌ನಲ್ಲಿದೆ. == ಸಿದ್ಧಾಂತ == ಆರೋಹಣ : ಅವರೋಹಣ : == ಸ್ವರಗಳು == == ಉಲ್ಲೇಖಗಳು == == ಮೂಲಗಳು == , ; , (1999). : 74 ( ಇಂಗ್ಲಿಷ್). . . 70. 9780954397609. Gauḍ Sārang Rāga (), ( ಇಂಗ್ಲಿಷ್). . 9780195650983. 8 2018.